NEET UG: ನೀಟ್​​ ಯುಜಿಯಲ್ಲಿ ಕಡಿಮೆ ಅಂಕ ಬಂದಿದೆಯೇ? ಹಾಗಿದ್ದರೆ ಬಿಎಎಂಎಸ್ ಕೋರ್ಸ್‌ಗೆ ಸೇರಿಕೊಳ್ಳಿ

By ಸುಖೇಶ್ ಶಾನಭಾಗ್ Updated: Monday, July 21, 2025, 7:01 [IST]

NEET BAMS Course

ನಿಮಗೆ ನೀಟ್​​ ಯುಜಿಯಲ್ಲಿ ಕಡಿಮೆ ಅಂಕ ಬಂದಿದೆಯೇ? ಹಾಗಿದ್ದರೆ ಚಿಂತಿಸಬೇಡಿ. ನೀಟ್​​ ಯುಜಿಯ ಪರೀಕ್ಷೆಯ ಮೂಲಕ ಎಂಬಿಬಿಎಸ್ (MBBS) ಮತ್ತು ಬಿಡಿಎಸ್ (BDS) ಗೆ ಮಾತ್ರವಲ್ಲದೆ ಬಿಎಎಂಎಸ್ (BAMS) ಕೋರ್ಸ್ ಗೆ ಕೂಡ ಪ್ರವೇಶ ನೀಡಲಾಗುತ್ತದೆ. ನಿಮಗೆ ನೀಟ್​​ ಯುಜಿಯಲ್ಲಿ ಕಡಿಮೆ ಅಂಕಗಳು ಬಂದಿದ್ದರೆ, ಜಾಸ್ತಿ ತಲೆ ಕೆಡಿಸಿಕೊಳ್ಳದೇ  ಬಿಎಎಂಎಸ್ (BAMS) ಕೋರ್ಸ್ ಗೆ ಸೇರಿಕೊಳ್ಳಿ. ಇದರಲ್ಲೂ ಸಹಿತ ನೀವು ಎಂಬಿಬಿಎಸ್ ರೀತಿಯೇ ಉತ್ತಮವಾದ ಮತ್ತು  ಸುಭದ್ರವಾದ  ವೃತ್ತಿಜೀವನವನ್ನು ಪಡೆಯಬಹುದು. 

ಬಿಎಎಂಎಸ್ (BAMS) ಅಂದರೆ ಆಯುರ್ವೇದ ಔಷಧ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಪದವಿ ಎಂದು ಅರ್ಥ. ಈ ಬಿಎಎಂಎಸ್ ಕೋರ್ಸ್ 5.5 ವರ್ಷಗಳ ಪದವಿ ಕೋರ್ಸ್ ಆಗಿದ್ದು, ಇದರಲ್ಲಿ 4.5 ವರ್ಷಗಳ ಆಳವಾದ ಅಧ್ಯಯನ ಸೇರಿದೆ. ನಂತರ 1 ವರ್ಷದ ಇಂಟರ್ನ್‌ಶಿಪ್ ಕೂಡ ಸೇರಿದೆ. ಇದರಲ್ಲಿ ಆಯುರ್ವೇದ ಔಷಧ ಮತ್ತು ಆಧುನಿಕ ಔಷಧ ಎರಡೂ ವಿಷಯಗಳನ್ನು ಕಲಿಸಲಾಗುತ್ತದೆ. ಬಿಎಎಂಎಸ್ ಪದವಿ ಪಡೆದ ನಂತರ ನೀವು ಆಯುರ್ವೇದ ವೈದ್ಯರಾಗುತ್ತೀರಿ.

ಬಿಎಎಂಎಸ್ ಅಂದರೆ ಏನು?

ಬಿಎಎಂಎಸ್ ಅಂದರೆ ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಅಂಡ್ ಸರ್ಜರಿ ಎಂದು ಅರ್ಥ. 

ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಅಂಡ್ ಸರ್ಜರಿ (ಬಿಎಎಂಎಸ್ / BAMS) ಕಾರ್ಯಕ್ರಮವು ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ಧತಿಯಾದ ಆಯುರ್ವೇದದ ಸುತ್ತ ಕೇಂದ್ರೀಕೃತವಾದ ಅಧ್ಯಯನವಾಗಿದೆ. ಇದು ಸಮಗ್ರ ಸ್ವಾಸ್ಥ್ಯ ಮತ್ತು ನೈಸರ್ಗಿಕವಾಗಿ  ರೋಗಗಳನ್ನು ಗುಣಪಡಿಸುವ ವಿಧಾನಗಳನ್ನು ಉತ್ತೇಜಿಸುತ್ತದೆ. ಆಯುರ್ವೇದ ಪರಿಕಲ್ಪನೆಗಳ ಜೊತೆಗೆ, ಪಠ್ಯಕ್ರಮವು ಅಂಗರಚನಾಶಾಸ್ತ್ರ, ಶರೀರಶಾಸ್ತ್ರ ಮತ್ತು ರೋಗನಿರ್ಣಯ ಕಾರ್ಯವಿಧಾನಗಳಂತಹ ಆಧುನಿಕ ವೈದ್ಯಕೀಯ ವಿಜ್ಞಾನದ ಅಗತ್ಯ ಅಂಶಗಳನ್ನು ಸಹ ಒಳಗೊಂಡಿದೆ. 

ಬಿಎಎಂಎಸ್ ಪದವೀಧರರು ಆಯುರ್ವೇದ ಚಿಕಿತ್ಸೆಗಳನ್ನು ಸಮಕಾಲೀನ ಆರೋಗ್ಯ ರಕ್ಷಣಾ ಪದ್ಧತಿಗಳೊಂದಿಗೆ ಸಂಯೋಜಿಸಲು ಸಜ್ಜಾಗಿದ್ದಾರೆ, ಇದು ಅವರಿಗೆ ಸುಸಜ್ಜಿತ ಮತ್ತು ಸಮಗ್ರ ವೈದ್ಯಕೀಯ ಆರೈಕೆಯನ್ನು ನೀಡಲು ಅನುವು ಮಾಡಿಕೊಡುತ್ತದೆ.

ಇದರ ಅಧ್ಯಯನ ಮುಗಿಸಿದ ನಂತರ, ನೀವು ಖಾಸಗಿ ಅಭ್ಯಾಸದ ಜೊತೆ ಜೊತೆಗೆ, ಸರ್ಕಾರಿ ಉದ್ಯೋಗವನ್ನೂ ಸಹ ಮಾಡಬಹುದು. ಈ ಕೋರ್ಸ್‌ನಲ್ಲಿ ಯಾವ ರೀತಿ ಕಟ್‌ಆಫ್ ಪ್ರವೇಶವನ್ನು ಮಾಡಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ನೀಟ್ (NEET) ಪ್ರವೇಶಕ್ಕೆ ಕಟ್ ಆಫ್ ಎಷ್ಟು?

ಸರ್ಕಾರಿ ಕಾಲೇಜುಗಳಿಂದ ಬಿಎಎಂಎಸ್ ಅಧ್ಯಯನ ಮಾಡಲು, ನೀಟ್ ಯುಜಿಯಲ್ಲಿ 550 ಕ್ಕಿಂತ ಹೆಚ್ಚು ಅಂಕಗಳು ಬರಬೇಕಾಗುತ್ತದೆ. ಎಸ್‌ಸಿ/ಎಸ್‌ಟಿ ವರ್ಗದ ವಿದ್ಯಾರ್ಥಿಗಳಿಗೆ ಸುಮಾರು 440 ಅಂಕಗಳು ಬಂದರೆ ಸಾಕಾಗುತ್ತದೆ. ಜನರಲ್, ಒಬಿಸಿ ಮತ್ತು ಎಸ್‌ಸಿ ವರ್ಗಕ್ಕೆ ಕಟ್‌ಆಫ್ ವಿಭಿನ್ನವಾಗಿ ಇರುತ್ತದೆ.

ಬಿಎಎಂಎಸ್ ಪದವಿ ಮುಗಿಸಿದ ನಂತರ ಸರ್ಕಾರಿ ಉದ್ಯೋಗ ಪಡೆಯುವ ವಿಧಾನ?

ಬಿಎಎಂಎಸ್ ಮುಗಿಸಿದ ನಂತರ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗಗಳನ್ನು ಕೂಡ ಮಾಡಬಹುದು. ವೈದ್ಯಕೀಯ ಅಧಿಕಾರಿ, ಆಯುರ್ವೇದ ವೈದ್ಯರು, ಆಯುರ್ವೇದ ತಜ್ಞರು, ಸಂಶೋಧನಾ ಅಧಿಕಾರಿ ಮುಂತಾದ ಹುದ್ದೆಗಳಿಗೆ ಸರ್ಕಾರಿ ಉದ್ಯೋಗಗಳು ದೊರಕುತ್ತವೆ. ಇದಕ್ಕಾಗಿ ಬಿಎಎಂಎಸ್ ಪದವಿ ಮುಗಿಸುವ ಅಗತ್ಯವಿದೆ. 

ಮೂಲಗಳ ಪ್ರಕಾರ, ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಆರಂಭಿಕ ವೇತನ ತಿಂಗಳಿಗೆ 25,000 – 60,000 ರೂ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ, ವೇತನವು ತಿಂಗಳಿಗೆ 30,000 – 70,000 ರೂ. ಇರುತ್ತದೆ. ಉದ್ಯೋಗ ಅನುಭವದೊಂದಿಗೆ ಸಂಬಳ ಸಹ ಹೆಚ್ಚಾಗುತ್ತಾ ಹೋಗುತ್ತದೆ.

ಸಂಬಂಧಿತ ಕೊಂಡಿಗಳು: ಇತ್ತೀಚಿನ ಸುದ್ದಿ, ಉದ್ಯೋಗಗಳು, ಶಿಕ್ಷಣ

Hash Tags: #LatestNews #Education

By ಸುಖೇಶ್ ಶಾನಭಾಗ್ Updated: Monday, July 21, 2025, 7:01 [IST]


Scroll to Top