ಎಸ್‌ಎಸ್‌ಸಿ ಸಿಜಿಎಲ್ (SSC CGL) 2025: ನೀವು ಡಿಗ್ರಿ ಮುಗಿಸಿ ಕೆಲಸ ಹುಡುಕುತ್ತಿದ್ದೀರಾ? ಹಾಗಿದ್ದರೆ ಇದು ನಿಮಗೆ ಒಳ್ಳೆಯ ಅವಕಾಶ. ಎಸ್‌ಎಸ್‌ಸಿ (ಸಿಬ್ಬಂದಿ ಆಯ್ಕೆ ಆಯೋಗ) ಸಿಜಿಎಲ್ (ಸಂಯೋಜಿತ ಪದವಿ ಮಟ್ಟದ) ಪರೀಕ್ಷೆ 2025 ರ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಿದೆ. ಸಿಬ್ಬಂದಿ ಆಯ್ಕೆ ಆಯೋಗವು ತನ್ನ ಅಧಿಕೃತ ವೆಬ್‌ಸೈಟ್ ssc.gov.in ನಲ್ಲಿ SSC CGL ಅಧಿಸೂಚನೆ ೨೦೨೫ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಅಧಿಸೂಚನೆಯಲ್ಲಿ 14582 ಹುದ್ದೆಗಳನ್ನು ಪ್ರಕಟ ಮಾಡಿದೆ. ಈ ಪರೀಕ್ಷೆಯ ಮೂಲಕ ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. SSC CGL ಪರೀಕ್ಷೆಯನ್ನು ವಾರ್ಷಿಕವಾಗಿ ನಡೆಸಲಾಗುತ್ತದೆ.
ಎಸ್‌ಎಸ್‌ಸಿ ಸಿಜಿಎಲ್ (SSC CGL) ಪರೀಕ್ಷೆಯ ಮೂಲಕ ನೇಮಕಾತಿ:
ಈ ನೇಮಕಾತಿಯ ಅಡಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಾದ ವಿದೇಶಾಂಗ ಸಚಿವಾಲಯದ ಹುದ್ದೆಗಳು, ರೈಲ್ವೆ, ಆದಾಯ ತೆರಿಗೆ, ಎನ್‌ಐಎ, ತೆರಿಗೆ ಸಹಾಯಕ, ಲೆಕ್ಕಾಧಿಕಾರಿ, ಅಂಚೆ ಸಹಾಯಕ, ಲೆಕ್ಕಪರಿಶೋಧಕ ಮುಂತಾದವು ಬರುತ್ತವೆ. ನೀವು ಸ್ಥಿರವಾದ, ಉದ್ಯೋಗ ಭದ್ರತೆ ಇರುವ ಸರ್ಕಾರಿ ಉದ್ಯೋಗ ಬಯಸುತ್ತಿದ್ದರೆ ಇದು ನಿಮಗೆ ಸುವರ್ಣಾವಕಾಶ.
ಎಸ್‌ಎಸ್‌ಸಿ ಸಿಜಿಎಲ್ (SSC CGL) 2025: ಪ್ರಮುಖವಾದ ದಿನಾಂಕಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 9 ಜೂನ್ 2025
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 4 ಜುಲೈ 2025
ಅರ್ಜಿ ತಿದ್ದುಪಡಿ ಅವಧಿಯ ದಿನಾಂಕ: 9 ಜುಲೈ ರಿಂದ 11 ಜುಲೈ 2025
ಟೈರ್-1 ಪರೀಕ್ಷೆಯ ದಿನಾಂಕ: 13 ರಿಂದ 30 ಆಗಸ್ಟ್ 2025
ಟೈರ್-2 ಪರೀಕ್ಷೆಯ ದಿನಾಂಕ: ಡಿಸೆಂಬರ್ 2025 (ಸಂಭಾವ್ಯ)
ಎಸ್‌ಎಸ್‌ಸಿ ಸಿಜಿಎಲ್ ಹುದ್ದೆ 2025: ಹುದ್ದೆಗಳು
ಈ ಬಾರಿ ಎಸ್‌ಎಸ್‌ಸಿ ಸಿಜಿಎಲ್ ನೇಮಕಾತಿಯಲ್ಲಿ ಒಟ್ಟು 14,582 ಹುದ್ದೆಗಳಿವೆ, ಇದು ಗ್ರೂಪ್ ಬಿ ಮತ್ತು ಸಿ ಹುದ್ದೆಗಳನ್ನು ಒಳಗೊಂಡಿದೆ.
ಕೆಲವೊಂದು ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ಉದಾಹರಣೆ ಕೊಡಬೇಕೆಂದರೆ ಈ ಕೆಳಗಿನಂತಿವೆ:
- ಸಿಬಿಐ, ಎನ್‌ಐಎ ಮತ್ತು ಮಾದಕವಸ್ತು ನಿಗ್ರಹ ದಳದಲ್ಲಿ ಉಪ-ನಿರೀಕ್ಷಕ
- ಸಹಾಯಕ ವಿಭಾಗ ಅಧಿಕಾರಿ: ವಿದೇಶಾಂಗ ಸಚಿವಾಲಯ, ರೈಲ್ವೆ ಸಚಿವಾಲಯ, ಐಬಿ
- ಲೆಕ್ಕಾಧಿಕಾರಿ, ಲೆಕ್ಕಪರಿಶೋಧಕ, ತೆರಿಗೆ ಸಹಾಯಕ, ಅಂಚೆ ಸಹಾಯಕ
- ಆದಾಯ ತೆರಿಗೆ ನಿರೀಕ್ಷಕ: ಸಿಬಿಡಿಟಿ
- ಕೇಂದ್ರ ಅಬಕಾರಿ ನಿರೀಕ್ಷಕ, ತಡೆಗಟ್ಟುವ ಅಧಿಕಾರಿ, ಪರೀಕ್ಷಕ: ಸಿಬಿಐಸಿ ಮುಂತಾದ ಹುದ್ದೆಗಳು ಎಸ್‌ಎಸ್‌ಸಿ ಸಿಜಿಎಲ್ ನೇಮಕಾತಿ ಅಡಿಯಲ್ಲಿ ಬರುತ್ತವೆ.
ಸಂಬಳ: ₹25,500 ರಿಂದ ₹81,100 ಪ್ರತಿ ತಿಂಗಳು (ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಸಂಬಳ ಶ್ರೇಣಿ ಕೂಡ ಬದಲಾಗುತ್ತದೆ)
ಎಸ್‌ಎಸ್‌ಸಿ ಸಿಜಿಎಲ್ ಗೆ ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡ:
1. ಎಸ್‌ಎಸ್‌ಸಿ ಸಿಜಿಎಲ್ ನೇಮಕಾತಿ ಪರೀಕ್ಷೆ 2025ರ ಹೆಚ್ಚಿನ ಹುದ್ದೆಗಳಿಗೆ ನೀವು ಪದವೀಧರರಾಗಿರಬೇಕು ಅಂದರೆ ಯಾವುದೇ ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ತೇರ್ಗಡೆಯಾಗಿ ಪದವಿ ಪಡೆದಿರಬೇಕು.
2. ಇದರ ಜೊತೆಗೆ ಕಿರಿಯ ಅಂಕಿಅಂಶ ಅಧಿಕಾರಿ ಹುದ್ದೆಗೆ ಪದವಿಯ ಜೊತೆಗೆ 12ನೇ ತರಗತಿಯಲ್ಲಿ ಗಣಿತದಲ್ಲಿ ಶೇ.60 ಅಂಕಗಳು, ಅಂಕಿಅಂಶ ತನಿಖಾಧಿಕಾರಿ (ದರ್ಜೆ-2) ಹುದ್ದೆಗೆ ಪದವಿಯ ಜೊತೆಗೆ ಅರ್ಥಶಾಸ್ತ್ರ/ಗಣಿತ/ಅಂಕಿಅಂಶಗಳು ಅಗತ್ಯ.
ಎಸ್‌ಎಸ್‌ಸಿ ಸಿಜಿಎಲ್ 2025 ವಿವರವಾದ ಅಧಿಸೂಚನೆಯನ್ನು ನೀವು ಎಸ್‌ಎಸ್‌ಸಿ ಅಧಿಕೃತ ಪೋರ್ಟಲ್ ನಲ್ಲಿ ನೋಡಬಹುದು.
ಎಸ್‌ಎಸ್‌ಸಿ ಸಿಜಿಎಲ್ ವಯೋಮಿತಿ (SSC CGL Age Limit)
ಎಸ್‌ಎಸ್‌ಸಿ ಸಿಜಿಎಲ್ ನೇಮಕಾತಿಗೆ ವಯೋಮಿತಿ 18 ರಿಂದ 27 ವರ್ಷ, 18 ರಿಂದ 30 ವರ್ಷ, 18 ರಿಂದ 32 ವರ್ಷ, 20 ರಿಂದ 30 ವರ್ಷ ಅಂದರೆ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯ ನಿಯಮಾವಳಿ ಬದಲಾಗುತ್ತದೆ. ಒಬಿಸಿಗೆ 3 ವರ್ಷ, ಎಸ್‌ಸಿ/ಎಸ್‌ಟಿಗೆ 5 ವರ್ಷ ಮತ್ತು ಪಿಡಬ್ಲ್ಯೂಡಿ ಮತ್ತು ಮಾಜಿ ಸೈನಿಕರಿಗೆ ಈ ನಿಯಮಾನುಸಾರ ವಿನಾಯಿತಿಯನ್ನು ನೀಡಲಾಗಿದೆ.
ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷಾ ಮಾದರಿ (SSC CGL Exam Pattern 2025)
ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ.
- ಟೈರ್-1 (ದಿನಾಂಕ: 13 ರಿಂದ 30 ಆಗಸ್ಟ್ 2025)
- ವಸ್ತುನಿಷ್ಠ ಮಾದರಿ
- ವಿಷಯಗಳು: ಸಾಮಾನ್ಯ ಬುದ್ಧಿಮತ್ತೆ, ತಾರ್ಕಿಕತೆ, ಪರಿಮಾಣಾತ್ಮಕ ಅಭಿರುಚಿ, ಇಂಗ್ಲಿಷ್, ಸಾಮಾನ್ಯ ಜ್ಞಾನ
- ನಕಾರಾತ್ಮಕ ಅಂಕಗಳು: ಪ್ರತಿ ತಪ್ಪು ಉತ್ತರಕ್ಕೆ 0.50 ಅಂಕ ಕಡಿತಗೊಳಿಸಲಾಗುತ್ತದೆ
- ವಿಸ್ತೃತ ವಿಷಯ ವ್ಯಾಪ್ತಿ, ಬಹು ಆಯ್ಕೆಯ ಪ್ರಶ್ನೆಗಳು
- ಅಂತಿಮ ಆಯ್ಕೆ ಪಟ್ಟಿಯನ್ನು ಇದರ ಆಧಾರದ ಮೇಲೆ ತಯಾರಿಸಲಾಗುತ್ತದೆ
ಅರ್ಜಿ ಶುಲ್ಕ (SSC CGL Application Fee)
- ಎಸ್‌ಎಸ್‌ಸಿ ಸಿಜಿಎಲ್ ನೇಮಕಾತಿ ಪರೀಕ್ಷೆ ೨೦೨೫ ರ ಅರ್ಜಿ ಶುಲ್ಕ ಕೇವಲ ₹100.
- ಮಹಿಳೆಯರು, ಎಸ್‌ಸಿ/ಎಸ್‌ಟಿ, ಪಿಡಬ್ಲ್ಯೂಡಿ ಮತ್ತು ಮಾಜಿ ಸೈನಿಕರಿಗೆ ಉಚಿತ.
- ಪಾವತಿಯನ್ನು ಆನ್‌ಲೈನ್ ಮೂಲಕ ಭೀಮ್ ಯುಪಿಐ, ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಮೂಲಕ ಮಾಡಬಹುದು.
ಆಯ್ಕೆ ಪ್ರಕ್ರಿಯೆ ನಡೆಯುವ ವಿಧಾನ (SSC CGL Selection Process)
ಎಸ್‌ಎಸ್‌ಸಿ ಸಿಜಿಎಲ್ ನೇಮಕಾತಿ 2025ಕ್ಕೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಮತ್ತು ರೋಲ್ ನಂಬರ್ ನೀಡಲಾಗುತ್ತದೆ. ಅಂತಿಮ ಆಯ್ಕೆಯ ಪ್ರಕ್ರಿಯೆಯು ಟೈರ್-೨ ರ ಅಂಕಗಳನ್ನು ಆಧರಿಸಿರುತ್ತದೆ.
ಎಸ್‌ಎಸ್‌ಸಿ ಸಿಜಿಎಲ್ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ? (How to Apply for SSC CGL 2025)
- ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್ ssc.gov.in ಗೆ ಭೇಟಿ ನೀಡಿ.
- ಹೊಸ ಬಳಕೆದಾರರಿಗೆ ಲಭ್ಯವಿರುವ "ಈಗಲೇ ನೋಂದಾಯಿಸಿ" ಆಯ್ಕೆಯನ್ನು ಆರಿಸುವ ಮೂಲಕ ನಿಮ್ಮ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿ.
- ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಶೈಕ್ಷಣಿಕ ವಿವರಗಳು ಮತ್ತು ವಿಳಾಸ ಸೇರಿದಂತೆ ಅಗತ್ಯ ಇರುವ ಎಲ್ಲಾ ಮಾಹಿತಿಯನ್ನು ಒದಗಿಸಿ. ನಿಮ್ಮ ನೋಂದಣಿ ಐಡಿ ಸಂಖ್ಯೆ ಮತ್ತು ಲಾಗಿನ್ ಪಾಸ್‌ವರ್ಡ್ ಅನ್ನು ರಚಿಸಲು ಎಲ್ಲಾ ಅಗತ್ಯ ಮಾಹಿತಿಗಳನ್ನು ನೀಡಿ ನಿಮ್ಮ ನೋಂದಣಿಯನ್ನು ಪೂರ್ಣಗೊಳಿಸಿ.
- ಲಾಗಿನ್ ಮಾಡಲು ಮತ್ತು SSC CGL 2025 ಅರ್ಜಿ ನಮೂನೆಯನ್ನು ಪ್ರವೇಶಿಸಲು ನೀವು ಉಪಯೋಗಿಸಿದ ಲಾಗಿನ್ ಐಡಿ ಸಂಖ್ಯೆ ಮತ್ತು ಲಾಗಿನ್ ಪಾಸ್‌ವರ್ಡ್ ಅನ್ನು ಬಳಸಿ.
- ಪೋರ್ಟಲ್ ಒಳಗೆ ಲಾಗಿನ್ ಆದ ಬಳಿಕ 'ಅರ್ಜಿ ಸಲ್ಲಿಸಿ' ವಿಭಾಗಕ್ಕೆ ಹೋಗಿ ಮತ್ತು ಎಸ್‌ಎಸ್‌ಸಿ ಸಿಜಿಎಲ್ 2025 ಆಯ್ಕೆಮಾಡಿ.
- ಅಗತ್ಯ ಮಾಹಿತಿಯನ್ನು ನಮೂದಿಸಿ, ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ಇರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ನಿಗದಿತ ಸ್ವರೂಪ ಮತ್ತು ಗಾತ್ರದಲ್ಲಿ ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
- ನಮೂದಿಸಿದ ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಒಂದು ಸಲ ಪರಿಶೀಲಿಸಿ.
- ನಂತರ UPI, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್‌ನಂತಹ ಯಾವುದೇ ಸ್ವೀಕೃತ ವಿಧಾನಗಳನ್ನು ಬಳಸಿಕೊಂಡು ಆನ್‌ಲೈನ್ ಮೋಡ್ ನಲ್ಲಿ ಶುಲ್ಕವನ್ನು ಪಾವತಿಸಿ.
ಅರ್ಜಿ ಶುಲ್ಕ : ಎಸ್‌ಎಸ್‌ಸಿ ಸಿಜಿಎಲ್ ಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ssc.gov.in ಮೂಲಕ ಆನ್‌ಲೈನ್‌ನಲ್ಲಿ 100 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.
ವಿಶೇಷ ಸೂಚನೆ: ಮಹಿಳಾ ಅಭ್ಯರ್ಥಿಗಳಿಗೆ ಹಾಗೂ SC, ST, PwBD ಮತ್ತು ESM ವರ್ಗಗಳಿಗೆ ಸೇರಿದವರಿಗೆ ಈ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಿ. ಸಲ್ಲಿಸಿದ ನಂತರ, ಅಂತಿಮ ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿ ಪ್ರಿಂಟ್‌ಔಟ್ ತೆಗೆದುಕೊಂಡು ಸುರಕ್ಷಿತವಾಗಿಡಿ.
ಅರ್ಜಿ ಸಲ್ಲಿಸುವ ಲಿಂಕ್: https://ssc.gov.in/login
ಅಧಿಕೃತ ವೆಬ್ ಸೈಟ್ : ಎಸ್‌ಎಸ್‌ಸಿ ಸಿಜಿಎಲ್ ಅಫೀಷಿಯಲ್ ವೆಬ್ ಸೈಟ್
ಇನ್ನೇಕೆ ತಡ! ಇಂತಹ ಸುವರ್ಣಾವಕಾಶವನ್ನು ಈಗಲೇ ಪಡೆಯಲು 4 ಜುಲೈ, 2025 ಮೊದಲು ನಿಮ್ಮ ಅರ್ಜಿ ಸಲ್ಲಿಸಿ ಹಾಗೂ ಪರೀಕ್ಷೆಯ ತಯಾರಿ ಆರಂಭಿಸಿ.
ಸಂಬಂಧಿತ ಲಿಂಕ್‌ಗಳು: ಇತ್ತೀಚಿನ ಸುದ್ದಿಗಳು, ಉದ್ಯೋಗಗಳು, ಫಿಟ್‌ನೆಸ್, ಜೀವನಶೈಲಿ, ಆರೋಗ್ಯ