ಇಸ್ರೋ ನೇಮಕಾತಿ 2025: ಇಸ್ರೋದಲ್ಲಿ ವಿಜ್ಞಾನಿ/ಎಂಜಿನಿಯರ್ ಉದ್ಯೋಗಾವಕಾಶಗಳು

By ಸುಖೇಶ್ ಶಾನಭಾಗ್ Published: Tuesday, June 3, 2025, 6:42 [IST]

ISRO Jobs

ಇಸ್ರೋ ನೇಮಕಾತಿ 2025: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ದಲ್ಲಿ ಹೊಸ ಉದ್ಯೋಗ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ನೀವು ಬಿ.ಇ ಅಥವಾ ಬಿ.ಟೆಕ್ ಪೂರ್ಣಗೊಳಿಸಿ ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ಇದು ನಿಮಗೆ ಒಳ್ಳೆಯ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಈ ನೋಟಿಫಿಕೇಶನ್ ಸಂಪೂರ್ಣವಾಗಿ ಓದಿ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು. 

ಆಯ್ಕೆಯಾದ ಅಭ್ಯರ್ಥಿಗಳಿಗೆ ಕೈತುಂಬಾ ಉತ್ತಮ ಸಂಬಳ ಮತ್ತು ಉದ್ಯೋಗ ಭದ್ರತೆಯ ಜೊತೆಗೆ ಉತ್ತಮವಾದ ಭವಿಷ್ಯ ದೊರೆಯುತ್ತದೆ.

ಇಸ್ರೋ ಜಾಬ್ ಓಪನಿಂಗ್:

ಬೆಂಗಳೂರಿನಲ್ಲಿ ಖಾಲಿ ಇರುವ 320 ವಿಜ್ಞಾನಿ/ಎಂಜಿನಿಯರ್ ‘SC’ ಗ್ರೂಪ್-ಎ ಗೆಜೆಟೆಡ್ ಹುದ್ದೆಗಳ ನೇಮಕಾತಿಗೆ ಇಸ್ರೋ ನೋಟಿಫಿಕೇಶನ್ ಬಿಡುಗಡೆ ಮಾಡಿದೆ.

ಹುದ್ದೆಗಳ ವಿವರಗಳು ಹೀಗಿವೆ:

ವಿಜ್ಞಾನಿ/ಎಂಜಿನಿಯರ್ - ಎಸ್‌ಸಿ (ಎಲೆಕ್ಟ್ರಾನಿಕ್ಸ್) – 113 ಹುದ್ದೆಗಳು

ವಿಜ್ಞಾನಿ/ಎಂಜಿನಿಯರ್ - ಎಸ್‌ಸಿ (ಮೆಕ್ಯಾನಿಕಲ್) – 160 ಹುದ್ದೆಗಳು

ವಿಜ್ಞಾನಿ/ಇಂಜಿನಿಯರ್ - ಎಸ್‌ಸಿ (ಕಂಪ್ಯೂಟರ್ ಸೈನ್ಸ್) – 44 ಹುದ್ದೆಗಳು

ವಿಜ್ಞಾನಿ/ಎಂಜಿನಿಯರ್ - ಎಸ್‌ಸಿ (ಎಲೆಕ್ಟ್ರಾನಿಕ್ಸ್ – ಪಿಆರ್‌ಎಲ್) – 02 ಹುದ್ದೆಗಳು

ವಿಜ್ಞಾನಿ/ಇಂಜಿನಿಯರ್ - ಎಸ್‌ಸಿ (ಕಂಪ್ಯೂಟರ್ ಸೈನ್ಸ್ – ಪಿಆರ್‌ಎಲ್) – 01 ಹುದ್ದೆ

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು :

ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿದ್ದರೆ  ಕನಿಷ್ಠ 65% ಅಂಕಗಳೊಂದಿಗೆ ಬಿಇ ಅಥವಾ ಬಿ.ಟೆಕ್ ಮುಗಿಸಿರಬೇಕು. ಅರ್ಹ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಅಥವಾ ಕಂಪ್ಯೂಟರ್ ಸೈನ್ಸ್ ಕ್ಷೇತ್ರಗಳಲ್ಲಿ ವ್ಯಾಸಂಗ ಮಾಡಿರಬೇಕು. 

ಅಭ್ಯರ್ಥಿಗಳ ವಯಸ್ಸಿನ ಮಿತಿ :

ಜೂನ್ 16, 2025 ಕ್ಕೆ ಅಭ್ಯರ್ಥಿಗಳು 28 ವರ್ಷಕ್ಕಿಂತ ಹೆಚ್ಚಿನ ವಯಸ್ಸು ಹೊಂದಿರಬಾರದು. ಆದರೂ ಸಹ ಕೆಟಗರಿ ಆಧಾರಿತವಾಗಿ ವಯಸ್ಸಿನ ಸಡಿಲಿಕೆ ಈ ಕೆಳಗಿನಂತಿರುತ್ತದೆ:

ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷಗಳು ವಯಸ್ಸಿನ ಸಡಿಲಿಕೆ

SC/ST ಅಭ್ಯರ್ಥಿಗಳಿಗೆ: 5 ವರ್ಷಗಳು ವಯಸ್ಸಿನ ಸಡಿಲಿಕೆ

ಅಂಗವಿಕಲರಿಗೆ: 10 ವರ್ಷಗಳು ವಯಸ್ಸಿನ ಸಡಿಲಿಕೆ

ಅರ್ಜಿಯ ವಿವರ:

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಮೇ 27, 2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 16, 2025

ಅರ್ಜಿಯ ಶುಲ್ಕ:  250  ರೂ.

ಆಯ್ಕೆಯ ಪ್ರಕ್ರಿಯೆ :

  • ಲಿಖಿತ ಪರೀಕ್ಷೆ
  • ಸಂದರ್ಶನ
  • ದಾಖಲೆ ಪರಿಶೀಲನೆ

ಪರೀಕ್ಷಾ ಕೇಂದ್ರಗಳ ಲಿಸ್ಟ್:

ಅಹಮದಾಬಾದ್, ಬೆಂಗಳೂರು, ನವದೆಹಲಿ, ತಿರುವನಂತಪುರಂ, ಭೋಪಾಲ್, ಚೆನ್ನೈ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಮುಂಬೈ.

ಆಯ್ಕೆಯಾದರೆ ನಿಮಗೆ ಸಿಗುವ ಸಂಬಳ ಹೀಗಿರಲಿದೆ:

ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ತಿಂಗಳಿಗೆ ₹56,100 ಯಂತೆ ಆರಂಭಿಕ ವೇತನ ಸಿಗಲಿದೆ. ಇದರ ಜೊತೆಗೆ, ಇತರ ಭತ್ಯೆಗಳು, ಉದ್ಯೋಗ ಆಧಾರಿತವಾದ ಸೌಕರ್ಯ ಮತ್ತು ಸವಲತ್ತುಗಳು ಸಹ ಸಿಗಲಿವೆ. 

ಅಭ್ಯರ್ಥಿಗಳು ಈ ಉದ್ಯೋಗದ ಸಂಪೂರ್ಣವಾದ ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು, ಇಸ್ರೋ ದ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಬಹುದು. 

ಅಧಿಕೃತ ವೆಬ್‌ಸೈಟ್: ಇಸ್ರೋ ದ ಅಧಿಕೃತ ವೆಬ್‌ಸೈಟ್

ಸಂಬಂಧಿತ ಲಿಂಕ್‌ಗಳು: ಇತ್ತೀಚಿನ ಸುದ್ದಿಗಳು, ಇತ್ತೀಚಿನ ಉದ್ಯೋಗಗಳು

By ಸುಖೇಶ್ ಶಾನಭಾಗ್ Published: Tuesday, June 3, 2025, 6:42 [IST]


Scroll to Top