ವಾರ ಭವಿಷ್ಯ: ಈ ವಾರ ಇಂದಿನಿಂದ ಆರಂಭವಾಗಲಿದ್ದು, ಕೆಲವು ರಾಶಿಗಳಿಗೆ ಈ ವಾರ ಖುಷಿಯ ಸಮಯವಾಗಿದ್ದರೆ, ಇನ್ನು ಕೆಲವು ರಾಶಿಗಳಿಗೆ ಕಷ್ಟಕರ ಸಮಯವಾಗಿರಲಿದೆ. ಜೂನ್ 09, 2025 ರಿಂದ ಜೂನ್ 15, 2025 ರವರೆಗೆ ಯಾವ ಯಾವ ರಾಶಿಗಳ ಭವಿಷ್ಯ ಮತ್ತು ಅದೃಷ್ಟ ಹೇಗಿರಲಿದೆ ಎನ್ನುವುದನ್ನು ನಾವು ತಿಳಿದುಕೊಳ್ಳೋಣ.
ಮೇಷ ರಾಶಿ: ಸವಾಲುಗಳಿಂದ ಕೂಡಿದ ವಾರ
ಈ ವಾರ ಮೇಷ ರಾಶಿಯವರಿಗೆ ಒತ್ತಡದ ವಾರವಾಗಿದೆ. ಉದ್ಯೋಗ ಸ್ಥಳದಲ್ಲಿ ಹಿರಿಯರು ಅಥವಾ ಸಹೋದ್ಯೋಗಿಗಳೊಂದಿಗೆ ವ್ಯತ್ಯಾಸಗಳು ಸಂಭವಿಸಬಹುದು. ಮುಗಿಯದ ಕಾರ್ಯಗಳು ಆತ್ಮವಿಶ್ವಾಸ ಮತ್ತು ಮನಶಾಂತಿಗೆ ಅಡಚಣೆಯಾಗಬಹುದು. ಹಣಕಾಸಿನ ಸ್ಥಿರತೆ ಇಲ್ಲದಿರುವ ಸಾಧ್ಯತೆ ಇದೆ, ಆದ್ದರಿಂದ ದೊಡ್ಡ ಖರ್ಚು ಅಥವಾ ಅಪಾಯಕಾರಿ ಹೂಡಿಕೆಗಳಿಂದ ದೂರವಿರಿ.
ಪ್ರೇಮ: ಸಂಗಾತಿಯೊಂದಿಗೆ ಸಂವಹನದ ಕೊರತೆ ದೂರವನ್ನು ಉಂಟುಮಾಡಬಹುದು.
ಆರೋಗ್ಯ: ಹೊಟ್ಟೆ ಹಾಗೂ ರಕ್ತ ಸಂಬಂಧಿತ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಅಗತ್ಯ.
ಸಲಹೆ: ಪ್ರತಿಸ್ಪರ್ಧೆಯ ಬಗ್ಗೆ ಜಾಗರೂಕರಾಗಿರಿ; ಹಠಾತ್ ಆಗಿ ಯೋಚನೆ ಮಾಡದೇ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ವೃಷಭ ರಾಶಿ: ನಿಧಾನವಾದ ಬೆಳವಣಿಗೆ, ಆದರೆ ಧೈರ್ಯದಿಂದ ಫಲ
ವೃಷಭರ ಜೀವನದಲ್ಲಿ ಮನೆಯ ಮತ್ತು ಉದ್ಯೋಗದ ಹೊಣೆಗಾರಿಕೆಯಿಂದ ಒತ್ತಡ ಉಂಟಾಗಬಹುದು. ದರ್ಪವನ್ನು ತೊರೆದು ಸ್ಥಿರತೆಗೆ ಆದ್ಯತೆ ನೀಡಿ, ವಿನಯವನ್ನು ಮೈಗೂಡಿಸಿಕೊಳ್ಳಿ. ವಾರದ ಮಧ್ಯಭಾಗದಲ್ಲಿ ತಾಳ್ಮೆಯಿಂದ ಕಷ್ಟಪಟ್ಟು ಕೆಲಸ ಮಾಡಿದವರಿಗೆ ಫಲ ಸಿಗುತ್ತದೆ.
ಕಾರ್ಯ: ಪ್ರಗತಿ ನಿಧಾನವಾಗಬಹುದು ಆದರೆ ವಾರದ ಕೊನೆಯಲ್ಲಿ ಸುಧಾರಣೆ ಕಾಣಬಹುದು.
ಹಣ: ಅಚಾನಕ್ ಖರ್ಚುಗಳು ಉಂಟಾಗಬಹುದು, ಹೆಚ್ಚುವರಿ ಬಜೆಟ್ ಕಾಯ್ದುಕೊಳ್ಳಿ.
ಪ್ರೇಮ: ಮಹಿಳಾ ಸ್ನೇಹಿತ ಅಥವಾ ಪತ್ನಿಯಿಂದ ಬರುವಂತಹ ಸಲಹೆ ಸ್ಪಷ್ಟತೆ ತರುತ್ತದೆ.
ಆರೋಗ್ಯ: ತಲೆನೋವು ಅಥವಾ ನಿದ್ರಾಹೀನತೆ ಉಂಟಾಗಬಹುದು.
ಮಿಥುನ ರಾಶಿ: ಪ್ರವಾಸ ಮತ್ತು ಖರ್ಚುಗಳಲ್ಲಿ ಮಿಶ್ರ ಫಲಿತಾಂಶ
ಈ ವಾರ ಹಣಕಾಸು ಮತ್ತು ಉದ್ಯೋಗದಲ್ಲಿ ಅನಿಶ್ಚಿತತೆ ಉಂಟಾಗಬಹುದು. ಚಿಕ್ಕ ಪ್ರಯಾಣ ಸಂಭವಿಸಬಹುದು, ಆದರೆ ಆರೋಗ್ಯ ಮತ್ತು ಗುಪ್ತ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ. ಗುಪ್ತ ಶತ್ರುಗಳು ಉದ್ಯೋಗದಲ್ಲಿ ವಿಘ್ನ ಉಂಟುಮಾಡಬಹುದು.
ಕಾರ್ಯ: ಕಚೇರಿಯ ರಾಜಕೀಯದಿಂದ ದೂರವಿರಿ; ಕೆಲಸದಲ್ಲಿ ಗಮನ ಕೇಂದ್ರಗೊಳಿಸಿ.
ಹಣ: ಅಚಾನಕ್ ಆಗಿ ಬೃಹತ್ ಖರ್ಚುಗಳು ಬರಬಹುದು.
ಪ್ರೇಮ: ಟೀಕೆ ಮಾಡದಿರಿ ಮತ್ತು ಕೋಪ ನಿಯಂತ್ರಿಸಿ.
ಆರೋಗ್ಯ: ಜೀರ್ಣ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಅಗತ್ಯ.
ಕರ್ಕಾಟಕ ರಾಶಿ: ಸಮತೋಲನದ ವಾರ, ಧನಾತ್ಮಕ ಉತ್ಸಾಹ
ಕರ್ಕಾಟಕ ರಾಶಿಯವರು ಆಲೋಚನೆ ಇಲ್ಲದೆ ದೊಡ್ಡ ಖರೀದಿಗಳನ್ನು ಮಾಡಬಾರದು. ವಿದೇಶಿ ವ್ಯವಹಾರ ಅಥವಾ ಶಿಕ್ಷಣದ ಅವಕಾಶಗಳು ದೊರೆಯಬಹುದು. ವಾರದ ಎರಡನೇ ಭಾಗದಲ್ಲಿ ಧನಾತ್ಮಕತೆ ಮತ್ತು ಸಾಮಾಜಿಕ ಆನಂದ ಹೆಚ್ಚಾಗುತ್ತದೆ.
ಕಾರ್ಯ: ಸಂಪರ್ಕಗಳ ಮೂಲಕ ಹೊಸ ಅವಕಾಶಗಳು ಬರಬಹುದು.
ಹಣ: ರಿಯಲ್ ಎಸ್ಟೇಟ್ ಹೂಡಿಕೆಗಳಲ್ಲಿ ಎಚ್ಚರಿಕೆ ಅವಶ್ಯಕ.
ಪ್ರೇಮ: ಪ್ರೇಮ ಸಂಬಂಧಗಳು ಈ ವಾರ ಹೊಂದಾಣಿಕೆಯಿಂದ ಮತ್ತಷ್ಟು ಘಟ್ಟಿಯಾಗುತ್ತವೆ ಮತ್ತು ಬೆಳೆಯುತ್ತವೆ.
ಪ್ರಯಾಣ: ರಜೆಯ ಯೋಜನೆಗೆ ಅನುಕೂಲಕರ ಸಮಯ.
ಸಿಂಹ ರಾಶಿ: ಸ್ಥಿರ ಪ್ರಗತಿ, ಹಣಕಾಸಿನಲ್ಲಿ ವ್ಯತ್ಯಾಸ
ಸಿಂಹ ರಾಶಿಯವರ ಪ್ರಗತಿ ನಿಧಾನವಾಗಬಹುದು ಆದರೆ ನಂತರ ಸುಧಾರಣೆ ಕಾಣಬಹುದು. ಆಸ್ತಿ ಸಂಬಂಧಿತ ವಿಷಯಗಳು ಒತ್ತಡ ತರಬಹುದು, ಆದರೆ ಕುಟುಂಬದ ಬೆಂಬಲ ಸಹಾಯ ಮಾಡುತ್ತದೆ. ವಾರದ ಮಧ್ಯದಲ್ಲಿ ಹಣಕಾಸಿನಲ್ಲಿ ಏರುಪೇರು ಉಂಟಾಗಬಹುದು.
ಕಾರ್ಯ: ಅರ್ಧದದಲ್ಲೇ ನಿಂತಿರುವ ಯೋಜನೆಗಳು ಮತ್ತೆ ಪ್ರಾರಂಭವಾಗಿ ಮುನ್ನುಗ್ಗುತ್ತವೆ.
ಹಣ: ದೊಡ್ಡ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ.
ಪ್ರೇಮ: ದಾಂಪತ್ಯ ಜೀವನದಲ್ಲಿ ಸುಖ ಮತ್ತು ಪ್ರೀತಿ ಹೆಚ್ಚಾಗುತ್ತದೆ.
ಸಲಹೆ: ತೀವ್ರ ನಿರ್ಧಾರಗಳಿಂದ ದೂರವಿರಿ; ಹಿರಿಯರ ಮಾರ್ಗದರ್ಶನ ಕೇಳಿ.
ಕನ್ಯಾ ರಾಶಿ: ಏರುಪೇರುಗಳ ವಾರ. ಒತ್ತಡ ನಿಯಂತ್ರಿಸಿ, ಹಣಕಾಸಿನಲ್ಲಿ ಎಚ್ಚರಿಕೆ ಇರಲಿ
ವಾರದ ಆರಂಭದಲ್ಲಿ ವೈಯಕ್ತಿಕ ಮತ್ತು ಉದ್ಯೋಗ ಒತ್ತಡ ಎದುರಾಗಬಹುದು. ಶತ್ರುಗಳು ಸಕ್ರಿಯರಾಗಬಹುದು ಮತ್ತು ವೆಚ್ಚಗಳು ಹೆಚ್ಚಾಗಬಹುದು.
ಆರೋಗ್ಯ: ಹಳೆಯ ಕಾಯಿಲೆ ಮತ್ತೆ ಕಾಣಿಸಿಕೊಳ್ಳಬಹುದು.
ಪ್ರೇಮ: ಪ್ರೇಮ ಜೀವನದಲ್ಲಿ ವೈಮನಸ್ಯ, ಮನಸ್ತಾಪಗಳು ಉಂಟಾಗಬಹುದು.
ಕುಟುಂಬ: ಅಣ್ಣ-ತಮ್ಮಂದಿರ ಅಭಿಪ್ರಾಯವನ್ನು ಗೌರವಿಸಿ.
ಹಣ: ಸಾಲ ತೆಗೆದುಕೊಳ್ಳುವುದು ತಪ್ಪಿಸಿ.
ತುಲಾ ರಾಶಿ: ಶುಭವಾರ, ಉದ್ಯೋಗ ಪ್ರಗತಿಯ ಅವಕಾಶ
ತುಲಾ ರಾಶಿಯವರಿಗೆ ಈ ವಾರ ಫಲಪ್ರದವಾಗಿರುತ್ತದೆ. ಅದೃಷ್ಟ ಬೆಂಬಲಿಸುತ್ತದೆ ಮತ್ತು ಉದ್ಯೋಗದಲ್ಲಿ ಪ್ರಗತಿ ಅಥವಾ ಬಡ್ತಿ ಸಂಭವಿಸುತ್ತದೆ. ವ್ಯಾಪಾರ ಲಾಭದಾಯಕ, ಆದರೆ ಅಪಾಯಕರ ಹೂಡಿಕೆ ತಪ್ಪಿಸಿ.
ಕಾರ್ಯ: ಸಹೋದ್ಯೋಗಿಗಳು ಮತ್ತು ಹಿರಿಯರಿಂದ ಬೆಂಬಲ ದೊರೆಯುತ್ತದೆ.
ಪ್ರೇಮ: ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ.
ವಿದ್ಯಾರ್ಥಿಗಳು: ಪರೀಕ್ಷೆಗಳಲ್ಲಿ ಯಶಸ್ಸು ನಿರೀಕ್ಷಿಸಬಹುದು.
ಸಲಹೆ: ಹಣಕಾಸು ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ.
ವೃಶ್ಚಿಕ ರಾಶಿ: ಮಿಶ್ರ ಫಲಿತಾಂಶ. ವಂಚನೆ ಮತ್ತು ಖರ್ಚುಗಳ ಬಗ್ಗೆ ಎಚ್ಚರಿಕೆ ಇರಲಿ
ವೃಶ್ಚಿಕ ರಾಶಿಯವರ ಆದಾಯದಲ್ಲಿ ವ್ಯತ್ಯಾಸ ಮತ್ತು ವೆಚ್ಚಗಳು ಹೆಚ್ಚಾಗಬಹುದು. ನಂಬಿಕೆಯ ಸಮಸ್ಯೆಗಳು ಉಂಟಾಗಬಹುದು, ಹೀಗಾಗಿ ವೈಯಕ್ತಿಕ ಯೋಜನೆಗಳನ್ನು ಗುಪ್ತವಾಗಿಟ್ಟುಕೊಳ್ಳಿ.
ಕಾರ್ಯ: ಉದ್ಯೋಗದಲ್ಲಿ ಭಾವನಾತ್ಮಕ ನಿರ್ಧಾರ ತಪ್ಪಿಸಿ.
ಹಣ: ಅಚಾನಕ್ ಖರ್ಚುಗಳು ಒತ್ತಡ ಉಂಟುಮಾಡಬಹುದು.
ಆರೋಗ್ಯ: ಮಾನಸಿಕ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಪ್ರೇಮ: ಆಪ್ತ ಸಂಬಂಧಗಳಲ್ಲಿ ಎಚ್ಚರಿಕೆಯಿಂದಿರಿ.
ಧನು ರಾಶಿ: ಒತ್ತಡದ ಆರಂಭ. ವಿನಯದಿಂದಿರಿ, ಜಗಳ ತಪ್ಪಿಸಿ
ಧನು ರಾಶಿಯವರಿಗೆ ಈ ವಾರ ಸಮತೋಲನ ಕಾಯುವುದು ಕಠಿಣವಾಗಬಹುದು. ಆಸ್ತಿ ವಿಷಯಗಳಲ್ಲಿ ತೀವ್ರ ನಿರ್ಧಾರ ತೆಗೆದುಕೊಳ್ಳಬೇಡಿ. ಜಗಳಗಳನ್ನು ತಪ್ಪಿಸಿ.
ಕಾರ್ಯ: ಫಲ ಪಡೆಯಲು ಕಠಿಣ ಪರಿಶ್ರಮ ಅಗತ್ಯ.
ಕುಟುಂಬ: ಜಗಳಗಳು ಉಂಟಾಗಬಹುದು; ಸಹನೆ ಅಗತ್ಯ.
ಹಣ: ಖರ್ಚು ಮಿತಿಯಲ್ಲಿ ಇಡಿರಿ.
ಪ್ರೇಮ: ಜೀವನ ಸಂಗಾತಿಯ ಸಲಹೆ ನಿಮಗೆ ದಾರಿ ತೋರಬಹುದು.
ಮಕರ ರಾಶಿ: ಬಹಳ ಶುಭವಾರ
ಮಕರ ರಾಶಿಯವರ ಜೀವನದಲ್ಲಿ ಈ ವಾರ ಅತ್ಯಂತ ಶುಭವಾಗಿರುತ್ತದೆ. ಯೋಜನೆಗಳು ಪ್ರಾರಂಭವಾಗುತ್ತವೆ ಮತ್ತು ಹಳೆಯ ಕೆಲಸಗಳು ಪೂರ್ಣಗೊಳ್ಳುತ್ತವೆ. ಕುಟುಂಬದಲ್ಲಿ ಸಂತೋಷ ಮತ್ತು ಬೆಂಬಲ ಇರುತ್ತದೆ.
ಕಾರ್ಯ: ನಾಯಕತ್ವ ಗುರುತಿಸಲ್ಪಡುತ್ತದೆ ಮತ್ತು ಪ್ರಶಂಸೆ ಸಿಗುತ್ತದೆ.
ಹಣ: ಲಾಭ ಹೆಚ್ಚಾಗುತ್ತದೆ; ನಿರ್ಲಕ್ಷ್ಯವಿರಬಾರದು.
ಪ್ರೇಮ: ಸಂಬಂಧಗಳಲ್ಲಿ ಸಾಮರಸ್ಯ ಮತ್ತು ಭಾವನಾತ್ಮಕ ಸಂಪರ್ಕ.
ಸಲಹೆ: ಆಲಸ್ಯ ತಪ್ಪಿಸಿ; ಚುರುಕಾಗಿ ಇರಿ.
ಕುಂಭ ರಾಶಿ: ಸುಗಮ ಪ್ರಗತಿ. ಖರ್ಚಿನಲ್ಲಿ ನಿಯಂತ್ರಣ ಅಗತ್ಯ
ಕುಂಭ ರಾಶಿಯವರ ಬಹುಪಾಲು ಕಾರ್ಯಗಳು ಸುಗಮವಾಗಿ ನಡೆಯುತ್ತವೆ. ಆದರೆ ಹಣಕಾಸಿನಲ್ಲಿ ನಿಯಂತ್ರಣ ಅಗತ್ಯ. ವಾರದ ಮಧ್ಯದಲ್ಲಿ ಗೊಂದಲ ಉಂಟಾಗಬಹುದು, ತಕ್ಷಣ ಯೋಚಿಸದೇ ನಿರ್ಧಾರ ತೆಗೆದುಕೊಳ್ಳಬೇಡಿ.
ಕಾರ್ಯ: ಬಡ್ತಿ ಅಥವಾ ಅನುಕೂಲಕರ ಬದಲಾವಣೆ ಸಂಭವಿಸಬಹುದು.
ಹಣ: ಆಲೋಚನೆ ಇಲ್ಲದ ಖರ್ಚು ತಪ್ಪಿಸಿ.
ಪ್ರೇಮ: ಸಂಗಾತಿಯೊಂದಿಗೆ ಶಾಂತಿಯುತ ಕ್ಷಣಗಳ ಅನುಭವ.
ಆರೋಗ್ಯ: ಯೋಗ ಮತ್ತು ಧ್ಯಾನವನ್ನು ನಿತ್ಯ ಚಟುವಟಿಕೆಯಲ್ಲಿ ಸೇರಿಸಿ.
ಮೀನ ರಾಶಿ: ಧನಾತ್ಮಕ ಬೆಳವಣಿಗೆ. ಕುಟುಂಬ ಮತ್ತು ಕೆಲಸದಿಂದ ಸಂತೋಷ
ಮೀನ ರಾಶಿಯವರಿಗೆ ಈ ವಾರ ಫಲಪ್ರದ ಮತ್ತು ಶ್ರೇಷ್ಠವಾಗಿರುತ್ತದೆ. ಕುಟುಂಬದಿಂದ ಬೆಂಬಲ ದೊರೆಯುತ್ತದೆ ಮತ್ತು ವ್ಯಾಪಾರದಲ್ಲಿ ಉತ್ತಮ ಫಲಿತಾಂಶಗಳು ಕಂಡುಬರುತ್ತವೆ.
ಕಾರ್ಯ: ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ.
ಹಣ: ಹಳೆಯ ಸಾಲ ಪರಿಹರಿಸಬಹುದಾದ ಅವಕಾಶ.
ಪ್ರೇಮ: ಪ್ರೇಮ ಮತ್ತು ದಾಂಪತ್ಯದಲ್ಲಿ ಸಂತೋಷದ ಕ್ಷಣಗಳು.
ಸಲಹೆ: ಸಾಮಾಜಿಕ ಸಂಪರ್ಕವನ್ನು ಬಲಪಡಿಸಿ; ಭಾವನಾತ್ಮಕ ಬಾಂಧವ್ಯ ಬೆಳೆಸಿ.
ಸಂಬಂಧಿತ ಕೊಂಡಿಗಳು: ಇತ್ತೀಚಿನ ಸುದ್ದಿಗಳು, ಆಧ್ಯಾತ್ಮಿಕತೆ, ಜ್ಯೋತಿಷ್ಯ